ಪೆಪ್ಸಿ - ಕೋಲಾ

'ಅಣ್ಣಾ ಕೂಲ್ ಡ್ರಿಂಕ್ಸ್ ಇದೇನಾ..??'..'ಒಂದು Slice ಮತ್ತೆ ಒಂದು 7Up ಕೊಡಿ..'
'ಹೇ..ಎಳನೀರು ಇದೆ ಕಣೋ..'..
ಸ್ನೇಹಿತ ಈಗೆ ಹೇಳಿದರೂ ಕೂಡ ನೀವು ಅದನ್ನೇ ಕುಡಿದಿರುತ್ತೀರಿ.
ಮೇಲಿನ ಎರಡೂ ಐಟಂ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಅವುಗಳನ್ನ ತಯಾರಿಸುವ ಕಂಪನಿ ಬಗ್ಗೆ ಒಂದು ಚಿಕ್ಕ ಮಾಹಿತಿ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವೆ.
ಪೆಪ್ಸಿಕೋ - ಇದೊಂದು ಆಹಾರ ಮತ್ತು ಪಾನೀಯ ತಯಾರಿಸುವ ಅಂತಾರಾಷ್ಟ್ರೀಯ ಕಂಪನಿ. ಜಗತ್ತಿನ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದು. ಅಮೆರಿಕ ಮೂಲದ ಈ ಕಂಪನಿ ಭಾರತಕ್ಕೆ ಕಾಲಿಟ್ಟಿದ್ದು 1989ರಲ್ಲಿ. ಅಲ್ಲಿಂದೀಚೆಗೆ ಅದು ನಷ್ಟ ಅನುಭವಿಸಿದ್ದೇ ಕಾಣಲಿಲ್ಲ. ಅಷ್ಟೊಂದು ಪ್ರಭಾವಿತರಾಗಿದ್ದರು ನಮ್ಮ ಭಾರತೀಯ ಜನ ಆ ಕಂಪನಿಯ ಪ್ರಾಡಕ್ಟ್ಗಳಿಗೆ. ಇರಲಿ, ಭಾರತಕ್ಕೆ ಕಾಲಿಟ್ಟ ಈ ಕಂಪನಿ ಮಾಡಿದ್ದೇನು ಗೊತ್ತೇ..ಮನೆಯಲ್ಲೇ ಸ್ನ್ಯಾಕ್ಸ್ ತಯಾರಿಸುತ್ತುದ್ದ ನಮ್ಮ ಜನಕ್ಕೆ ಅದೇ ಮಾದರಿಯಲ್ಲಿ ಈ ಕಂಪನಿ ತಯಾರಿಸಲು ಪ್ರಾರಂಭಿಸಿತು. ನಗರ ಪ್ರದೇಶಗಳಲ್ಲಿ ತನ್ನ ವ್ಯಾಪಾರ ಆರಂಭಿಸಿ ದೇಶದಾದ್ಯಂತ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿತು. ಆ ಮೂಲಕ ಮನೆಯಲ್ಲೇ ತಯಾರಿಸಿ ಮಾರುತ್ತಿದ್ದ ಸಣ್ಣ ವ್ಯಾಪಾರಿಗಳ ದುಡಿಮೆಗೆ ಹೊಡೆತ ಕೊಟ್ಟಿತು. ಇನ್ನು ತಂಪು ಪಾನೀಯ ವಿಷಯಕ್ಕೆ ಬರುವುದಾದರೆ FDA ಕೂಡ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದನ್ನ ಮನದಟ್ಟು ಮಾಡಿದರೂ ಭಾರತದಲ್ಲಿ ಕಂಪನಿಗೆ ಯಾವುದೇ ಪರಿಣಾಮ ಬೀರಲಿಲ್ಲ. ಏಕೆಂದರೆ ನಮ್ಮ ಜನರಿಗೆ ಬೆರೆಯವರದೆ ಅದರಲ್ಲೂ ವಿದೇಶಿ ಎಂದರೆ ಸಾಕು ಅದನ್ನೇ ಆಧುನಿಕತೆ ಅಂದುಕೊಂಡು ಬಿಡುತ್ತಾರೆ. ದೇಶದಲ್ಲಿ 62 ಪ್ಲಾಂಟ್ಗಳನ್ನು ಹೊಂದಿರುವ ಪೆಪ್ಸಿಕೋ ಕಂಪನಿ 200 ಎಂಎಲ್ ಪೆಪ್ಸಿ ಪಾನೀಯ ಉತ್ಪಾದಿಸಲು ಖರ್ಚು ಮಾಡುವ ಹಣವೆಷ್ಟು ಗೊತ್ತೇ..ಕೇವಲ 1-2 ರೂಪಾಯಿ. ಮತ್ತು ಇದನ್ನು ಮಾರುವುದು ಹತ್ತು ಪಟ್ಟು ಹೆಚ್ಚು ಲಾಭಕ್ಕೆ. ಇನ್ನು ಅದೇ ಒಂದು ಲೀಟರ್ ಪಾನೀಯ ಮಾಡಲು ಬೇಕಾಗುವ ನೀರೆಷ್ಟು ಗೊತ್ತೇ..ಸುಮಾರು 55 ಲೀಟರ್ ನೀರು ಒಂದು ಲೀಟರ್ ಪೆಪ್ಸಿ ತಯಾರಿಸಲಿಕ್ಕೆ ಖರ್ಚಾಗುವುದು. 
ಇನ್ನು ಇದರಲ್ಲಿ ಸೇರಿಸುವ ಕೆಮಿಕಲ್ಸ್ ಅಂತೂ ಜೀವಕ್ಕೆ ಯಾವುದೇ ಸಮಯದಲ್ಲಾದರು ಅಪಾಯ ತರುತ್ತವೆ. 
ಇದರಲ್ಲಿರುವ ಅಧಿಕ ಸಕ್ಕರೆ ಪ್ರಮಾಣ ಹೃದಯ ಮತ್ಯು ಕರುಳು ಬೇನೆಯನು ತರುತ್ತದೆ ಮತ್ತು ಟೈಪ್ 2 ಡೈಯಬಿಟಿಸ್ಗೆ ಕಾರಣವಾಗುವುದು. HFCS ಎನ್ನುವ ಸಕ್ಕರೆಯನ್ನ ಇದರಲ್ಲಿ ಸೇರಿಸುತ್ತಾರೆ.
ಪ್ರಿಸರ್ವೆಟಿವ್ ಆಗಿ ಬಳಸುವ ಫಾಸ್ಪರಿಕ್ ಆಸಿಡ್ ಮತ್ತು ಸಿಟ್ರಿಕ್ ಆಸಿಡ್ ಮೂಳೆ ಸವೆತ, ಕಿಡ್ನಿ ಸಮಸ್ಯೆ, ಮತ್ತು ಹಲ್ಲಿನ ಸಮಸ್ಯೆಗಳನ್ನು ತಂದೊಡ್ಡುವವು.
ಪೆಪ್ಸಿ ಮತ್ತು ಕೋಲಾದಲ್ಲಿ ಬಳಸುವ ಕರಮೆಲ್ ಕಲರ್ ಒಂದು ಕಾರ್ಸಿನೋಜೇನಿಕ್ ಏಜೆಂಟ್ ಆಗಿದ್ದು ಕ್ಯಾನ್ಸರ್ಗೆ ಕಾರಣವಾಗುವ ಅಂಶವಾಗಿದೆ.
ಇಷ್ಟೆಲ್ಲಾ ಇದ್ದರೂ ನಮ್ಮ ದೇಶದಲ್ಲಿ ಪ್ರತಿನಿತ್ಯ ಕೋಟಿಗಟ್ಟಲೇ ಲಾಭ ಗಳಿಸುತಿದೆ ಈ ಕಂಪನಿ.
ಜಾಗೃತಿ ಮೂಡದಿದ್ದರೆ ನಮ್ಮ ದೇಶಿ ತಿನಿಸುಗಳನ್ನ ಮತ್ತು ಪಾನೀಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಒಂದು ಎಳನೀರು ತೆಗೆದುಕೊಂಡರೆ ಆ ಹಣ ನಮ್ಮ ದೇಶದಲ್ಲೇ ಉಳಿಯುವುದು ಆದರೆ ಒಂದು ಪೆಪ್ಸಿಕೋ ಪ್ರಾಡಕ್ಟ್ ತೆಗೆದುಕೊಂಡರೆ ಅದು ಅಮೆರಕದ ಪಾಲಾಗುವುದು. ದೇಶಕ್ಕಾಗಿ ಏನು ಮಾಡುವುದು ಎಂದು ಯೋಚಿಸುವರೆಲ್ಲ ಈ ಚಿಕ್ಕ ಕೆಲಸ ಮಾಡಿದರಾಯಿತು ಅದೇ ದೊಡ್ಡದಾಗುವುದು..
ನಿಮಗೆ ತಿಳಿದಿರಲೆಂದು ಪೆಪ್ಸಿಕೋ ಕಂಪನಿಯ ವಿವಿಧ ಪ್ರಾಡಕ್ಟ್ಗಳನ್ನು ಇಲ್ಲಿ ಬರೆದಿರುತ್ತೇನೆ.
Pepsi, Mount dew, Lay's, Kurkure, Tropicana, Aquafina, Lipton Tea, Mirinda, Slice, 7Up, Uncle Chips, Quaker, Ruffles chips, Tostitos tortilla, Fritos corn chips, Mist Twist, Lehar, Cheetos, Gatorade, Walkers, Diet pepsi.
ಇವಿಷ್ಟನ್ನು ಎಲ್ಲೇ ನೋಡಿದರೂ ಕೂಡ ಯಾವುದೇ ಕಾರಣಕ್ಕೂ ತೆಗೆದುಕೊಳ್ಳಬೇಡಿ. ಈಗಾಗಲೇ ತಮಿಳುನಾಡು ಮತ್ತು ಕೇರಳದಲ್ಲಿ ಅವಗಳನ್ನ ನಿಷೇಧಿಸಲಾಗಿದೆ. ಕರ್ನಾಟಕದಲ್ಲೂ ಒಂದು ಮಹತ್ವದ ಹೆಜ್ಜೆಯನ್ನಿಟ್ಟರೆ ನಮ್ಮಲ್ಲೂ ಸಾಧ್ಯವಾಗುವುದು.
ನಮ್ಮ ಹಣ ನಮ್ಮಲ್ಲೇ ಉಳಿಯಬೇಕಂದರೆ ಇವುಗಳನ್ನ ತ್ಯಜಿಸಿ..ನಮ್ಮ ಹಣ ಅಮೆರಿಕದ ಪಾಲಾಗಿ ನಮ್ಮ ದೇಶದ ಸಂಪತ್ತು ಮತ್ತೆ ಲೂಟಿಯಾಗಬೇಕೆಂದರೆ ಅದನ್ನೇ ಬಳಸಿ.
ನಿಮ್ಮ ಕೈಯಲ್ಲಿ ನಿಮ್ಮ ದೇಶ.

✒️ಪ್ರವೀಣ್ ಕಡ್ಲಿ


Comments