"ಯೋಗ" ನಾವೆಲ್ಲರೂ ಕೇಳಿರುವ ಮಾತು. ನಾವು ದಿನನಿತ್ಯ ಯೋಗ ಮಾಡುತ್ತೇವೆ ನಮ್ಮ ಉತ್ತಮ ಆರೋಗ್ಯಕ್ಕೆ ಹಾಗೂ ಯೋಗದ ಅನೇಕ ಆಸನಗಳನ್ನು ಮಾಡುತ್ತೇವೆ . ಆದರೆ ಜೀವನದ ಆರೋಗ್ಯಕ್ಕೆ ಯೋಗ ಹೇಗಿರಬೇಕು.??
ದೇಹದ ಉತ್ತಮ ಆರೋಗ್ಯ ಸ್ಥಿತಿಗ್ರ ಯೋಗ ಅವಶ್ಯಕ. ಆದರೆ ಜೀವನದ ಸಾರ್ಥಕ ಎನಿಸಿಕೊಳ್ಳಬೇಕಾದರೆ ಜೀವನಯೋಗ ಮುಖ್ಯ. ಯೋಗಕ್ಕೆ ಅನೇಕ ಆಯಾಮಗಳಿವೆ; ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಉಪಾಸನಯೋಗ, ಈಗೆ ಅನೇಕ ಆಯಾಮಗಳಿವೆ. ನಮ್ಮ ನಿತ್ಯ ಜೀವನದ ಪ್ರತಿಯೊಂದು ಕ್ರಿಯೆಯೂ ಯೋಗವಾಗಬೇಕು. ಆಗ ಜೀವನಕ್ಕೆ ಒಂದು ಬೆಲೆ ಬರುತ್ತದ, ಸಾರ್ಥಕವಾಗುತ್ತದೆ. ಜೀವನಯೋಗ ಸಹಜವಾಗಬೇಕು ಅದು ಅಸಹಜವಾಗಬಾರದು. ಜೀವನಯೋಗವೆಂದರೆ ದಿನನಿತ್ಯ ಜೀವನದ ಪ್ರತಿ ಕ್ರಿಯೆಯನ್ನು ಅರಿತು ಮಾಡಬೇಕು. ಪ್ರತಿಯೊಂದು ವಸ್ತುಗಳ ಕನಿಷ್ಠ ಅರಿವು ಇರಬೇಕು, ತಿಳಿವಳಿಕೆ ಇರಬೇಕು. ಪ್ರತಿ ಕ್ರಿಯೆಯನ್ನು ಅರಿತು, ನಂಬಿಕೆಯಿಂದ ಆಚರಿಸಿದರೆ ಅದು ನಿಜವಾದ ಆಚರಣೆ ಆಗುತ್ತದೆ. ನಮ್ಮ ಪ್ರಾಚೀನ ಸಂಸ್ಕೃತಿಯ ಪ್ರತಿಯೊಂದು ನಡೆ ನುಡಿ ಮತ್ತು ಆಚರಣೆಗಳು ಅದರದೇ ಆದ ಮಹತ್ವವನ್ನ ಹೊಂದಿವೆ. ಯಾವುದೂ ಮೂಢನಂಬಿಕೆಯಲ್ಲ, ಪ್ರತಿಯೊಂದಕ್ಕೂ ಒಂದು ಮೂಲಭೂತ ಅರ್ಥವಿದೆ. ನಮ್ಮ ಉಪನಿಷತ್ತುಗಳು ಹೇಳಿದ್ದೂ ಇದನ್ನೇ. ಉಪನಿಷತ್ತು ಹೇಳಿದ ಹಾಗೆ ನಮ್ಮ ಜೀವನದ ಪ್ರತಿ ಆಚರಣೆ, ಪ್ರತೀ ಕ್ರಿಯೆಯೂ, ಅದರ ಆರಂಭದ ಮೊದಲು ನಮಗೆ ಅದರ ಪೂರ್ಣ ತಿಳಿವಳಿಕೆ ಇರಬೇಕು; ತಿಳಿಯದೆ, ಅರಿಯದೇ ಯಾವ ಆಚರಣೆಯನ್ನೂ ಆಚರಿಸಬಾರದು. ಆದರೆ ಇಂದು ನಮ್ಮ ಯಾಂತ್ರಿಕ ಜೀವನದಲ್ಲಿ ಪ್ರತಿಯೊಂದರ ಬಗ್ಗೆ ತಿಳಿವಳಿಕೆ ಇಲ್ಲದೆ ಕೇವಲ ಭಯದಿಂದ ಬಲವಂತಕ್ಕೆ ಮಾಡುವುದಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಕೆಲವು ಆಚರಣೆಗಳ ಪ್ರಾಮುಖ್ಯತೆಯನ್ನು ನಾವು ಅರಿಯಲಾಗುತ್ತಿಲ್ಲ, ನಮಗೆ ಪ್ರತಿಯೊಂದರ ಬಗ್ಗೆ ಮೊದಲು ನಂಬಿಕೆಯಿರಬೇಕು, ಆದರೆ ಅದನ್ನು ತಿಳಿದು ನಂಬಬೇಕೆ ಹೊರತು ಸುಮ್ಮನೇ ನಂಬಬಾರದು. ತಿಳಿವಳಿಕೆ ಇಲ್ಲದ ನಂಬಿಕೆ ಅಗತ್ಯವಿಲ್ಲ, ತಿಳಿವಳಿಕೆಯಿಲ್ಲದ ನಂಬಿಕೆಯ ಪಾಂಡಿತ್ಯ ಅದು ಶುಷ್ಕ ಪಾಂಡಿತ್ಯವೆನಿಸುತ್ತದೆ. ಇಂದಿನ ಜೀವನ ಪದ್ಧತಿಯಲ್ಲಿ ಕೆಲವು ಆಚರಣೆಗಳ ಬಗ್ಗೆ ನಮ್ಮ ಮಕ್ಕಳೇ ಪ್ರಶ್ನಿಸಿದಲ್ಲಿ ಅದಕ್ಕೆ ನಮ್ಮ ಬಳಿ ಉತ್ತರವಿರುವುದಿಲ್ಲ, ಅವುಗಳಿಗೆ ಉತ್ತರಿಸುವ ಬದಲಾಗಿ ನಾವು ಹಾಗೆಲ್ಲ ಪ್ರಶ್ನಿಸಬಾರದು ಎಂದು ಅವರ ಬಾಯಿ ಮುಚ್ಚಿಸುತ್ತೇವೆ, ಅದು ತಪ್ಪು, ಹಾಗೆ ಮಾಡಬಾರದು. ಆಚರಿಸುವ ಆಚರಣೆಗಳ ಹಿನ್ನೆಲೆ ಬಗ್ಗೆ ಮಕ್ಕಳಿಗೆ ಜ್ಞಾನ ತುಂಬಬೇಕು, ಅದರ ಇತಿಹಾಸ ತಿಳಿಸಬೇಕು. ಹಾಗಾದಲ್ಲಿ ನಮ್ಮ ಮಕ್ಕಳಲ್ಲಿ ನಮ್ಮ ಆಚರಣೆಗಳ ಬಗ್ಗೆ ಪ್ರಜ್ಞೆ ಮೂಡುತ್ತದೆ. ನಮ್ಮ ಪೂರ್ವಜರ ಪ್ರತಿಯೊಂದು ಆಚಾರ ವಿಚಾರಗಳಿಗೆ ಅದರದೇ ಆದ ಮಹತ್ವವಿದೆ ಮತ್ತು ನಿಗೂಢ ಅರ್ಥ ಮತ್ತು ನಂಬಿಕೆ ಇದೆ. ಗೀತೆಯಲ್ಲಿ ಕ್ರಿಷ್ಣ ಜೀವನ ಯೋಗದ ಬಗ್ಗೆ ಈಗೆಂದು ಹೇಳುತ್ತಾನೆ " ಯೋಗ: ಕರ್ಮಸು ಕೌಶಲಂ " .
ನಮ್ಮ ಜೀವನದ ಪ್ರತಿಯೊಂದು ಆಗು ಹೋಗುಗಳು, ನಡೆ ನುಡಿ, ಆಚಾರ ವಿಚಾರಗಳು,ಎಲ್ಲವೂ ಪ್ರಾಮಾಣಿಕತೆಯಿಂದ ಕೂಡಿರಬೇಕಾದರೆ ಇವುಗಳ ನಡೆ ನೇರವಾಗಿರಬೇಕು. ಗೀತೆಯಲ್ಲಿ ಕ್ರಿಷ್ಣನು ಅರ್ಜುನನಿಗೆ ಹೇಳುವ ಪ್ರತಿಯೊಂದು ಮಹತ್ವಪೂರ್ಣ ಸಂಗತಿಗಳಲ್ಲಿ ಹಾಗೂ ನಮ್ಮ ಜೀವನದ ಸಾರ್ಥಕಕ್ಕೆ ಮುಖ್ಯವಾಗುವಂತಹ ಕಾರಣಗಳಾಗುವಂತಹ ಪ್ರತಿಯೊಂದು ಸಾಧನೆಗಳ ಮೂಲ 'ಯೋಗ'. ನಮ್ಮ ದೇಶದ ಸಂಸ್ಕೃತಿ ಅತ್ಯಂತ ಶ್ರೀಮಂತವಾದದ್ದು, ಅದನ್ನು ಅರಿತು ನಡೆಯಬೇಕು. ಆದರೆ ಇಂದಿನ ಯಾಂತ್ರಿಕ ಜೀವನದಲ್ಲಿ ಸಾರಸಗಾಟಾಗಿ ಮರೆತಿದ್ದೇವೆ. ಅನೇಕ ಪಾಶ್ಚಿಮಾತ್ಯರು ಇಲ್ಲಿನ ಸಂಸ್ರ್ಕುತಿಯ ಬಗ್ಗೆ ಅಪಾರ ಅಭಿಮಾನವಿಟ್ಟುಕೊಂಡು ಈ ನೆಲಕ್ಕೆ ನತಮಸ್ತಕರಾಗಿ ಬರುತ್ತಾರೆ. ಆದರೆ ದುರದೃಷ್ಟವಶಾತ್ ಇಲ್ಲಿರುವವರಿಗೆ ಇಲ್ಲಿನ ಸಂಸ್ರ್ಕುತಿ, ಆಚರಣೆ, ವೇದ, ಉಪನಿಷತ್ತುಗಳು, ಪುರಾಣಗಳು, ತಿಳಿಯಲು ಕುತೂಹಲ ಮತ್ತು ಆಸಕ್ತಿ ಇಲ್ಲದಂತಾಗಿದೆ. ನಮ್ಮಲ್ಲಿ ಏನೂ ಇಲ್ಲ, ಅದೊಂದು ಗೊಡ್ಡು ಪುರಾಣವೆಂದು ನಾವೇ ಮೊದಲು ನಿರ್ಧರಿಸಿಬಿಟ್ಟಿದ್ದೇವೆ, ಆದರೆ ನಮ್ಮ ಈ ಅಜ್ಞಾನವನ್ನ ಪಕಕ್ಕಿಟ್ಟು ನಿಜವಾದ ತಿಳಿವಳಿಕೆಯಿಂದ ಅರಿತು ಜೀವಿಸಿದೊಡೆ ನಮ್ಮ ಜೀವನವು ಜೀವನಯೋಗವಾಗುತ್ತದೆ , ಜೀವನ ಸಾರ್ಥಕವೆನಿಸುತ್ತದೆ.
- Chetan Kumar
Lucky Club: The online gambling industry's most amazing
ReplyDeleteLucky Club - The online gambling industry's most luckyclub.live amazing casino site. Play at a top casino with slots, table games, & live dealer games.